Friday, August 11, 2017

ಹಾಡಿಸುವಾತನೇ ಹಾಡಿದ ಹಾಡು

'ಆಡಿಸಿದಾತ ಬೇಸರ ಮೂಡಿ ಆಟ ನಿಲಿಸಿದ' ಈ ಹಾಡು ಎಲ್ಲರಿಗೂ ಗೊತ್ತೇ ಇದೆ. ಶೋಕಭರಿತ ಈ ಹಾಡು, ಧ್ವನಿಯಲ್ಲಿದ್ದ ಗದ್ಗದತೆ, ಅಣ್ಣಾವ್ರ ಭಾರವಾದ ಹೆಜ್ಜೆಯೊoದಿಗಿನ ಮನೋಜ್ಞ ಅಭಿನಯ ಯಾರಿಗೆ ತಾನೇ ಮರೆಯೋಕೆ ಸಾಧ್ಯ !

ಇದು "ಕಸ್ತೂರಿ ನಿವಾಸ" ಚಿತ್ರದ ಶೋಕಗೀತೆ. ಈ ಹಾಡನ್ನು ಹಾಡಿದ್ದು ಸ್ವತಃ ಜಿ.ಕೆ.ವೆಂಕಟೇಶ್!! ಹೌದು ಚಿತ್ರದ  ಸ೦ಗೀತ ನಿರ್ದೇಶಕ ಜಿ.ಕೆ. ವೆಂಕಟೇಶ್.

ನಾನು ಈ ಹಾಡಿನ ಗಾಯಕ ಎ೦ದಿನ೦ತೆ ಪಿ.ಬಿ.ಶ್ರೀನಿವಾಸ್ ಅ೦ತ ಭಾವಿಸಿದ್ದೆ. ಇದೇ ಹಾಡಿನ ಆನ೦ದ ದ ಆವೃತ್ತಿ 'ಆಡಿಸಿ ನೋಡು, ಬೀಳಿಸಿ ನೋಡು, ಪಿ.ಬಿ.ಶ್ರೀನಿವಾಸ್ ರವರು ಹಾಡಿದ್ದು. ಎಲ್ಲೋ ಓದಿದ ಪ್ರಕಾರ, ಶೋಕದ ಆವೃತ್ತಿ ಕೂಡ ಶ್ರೀನಿವಾಸ್ ಅವರೇ ಹಾಡಬೇಕು ಅ೦ತ ನಿರ್ಧಾರ ಆಗಿತ್ತ೦ತೆ, ರೆಕಾರ್ಡಿಂಗ್ ಮಾಡೊ ವೇಳೆ ಶ್ರೀನಿವಾಸ್   ಮದರಾಸಿನಲ್ಲಿ ತು೦ಬಾ ಬ್ಯುಸಿ ಇದ್ದ ಕಾರಣ, ಸದ್ಯಕ್ಕೆ ಅ೦ತ್ಹೇಳಿ ಜಿ.ಕೆ.ವೆಂಕಟೇಶ್ ಅವರೇ ಟ್ರ್ಯಾಕ್ ಗಾಯಕರಾಗಿ ರೆಕಾರ್ಡ್ ಮುಗಿಸಿದ್ರು.. ಆಮೇಲೆ ಎಲ್ಲರಿಗೂ ಅದೇ ಇಷ್ಟ ಆಗಿ.. ಚಿತ್ರಕ್ಕೆ ಅಳವಡಿಸಿದರು.

ನಿಜ ಹೇಳಬೆಕು ಅ೦ದ್ರೆ ನನಗೆ ಜಿ.ಕೆ. ವೆಂಕಟೇಶ್ ಅವರ ಧ್ವನಿ ನೇ ಈ ಹಾಡಿಗೆ ಹೆಚ್ಚು ಸೂಕ್ತ ಅನಿಸುತ್ತದೆ. ಕೇಳಿ ಮತ್ತೊಮ್ಮೆ ಈ ಹಾಡು!!
ಹೆಚ್ಚಿನ ಮಾಹಿತಿ ತಿಳಿದಿದ್ದರೆ ದಯವಿಟ್ಟು ತಿಳಿಸಿ


No comments:

Post a Comment